ಕರ್ನಾಟಕ ರಾಜ್ಯ ಅರಣ್ಯ ರಕ್ಷಕರ ಹಾಗೂ ವೀಕ್ಷಕರ ಸಂಘ (ರಿ), ಬೆಂಗಳೂರು

KARNATAKA STATE FOREST GUARDS & WATCHERS ASSOCIATION (R), BENGALURU

ಪ್ರಧಾನ ಕಚೇರಿ, ಬೆಂಗಳೂರು

(ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅದಿನತ್ವ ಪಡೆದಿದೆ. ಅಖಿಲ ಭಾರತ ಮಹಾ ಸಂಘದಿಂದ ಪ್ರತಿನಿಧಿಸಲ್ಪಟ್ಟಿದೆ)

ಕರ್ನಾಟಕ ರಾಜ್ಯ ಅರಣ್ಯ ರಕ್ಷಕರ ಹಾಗೂ ವೀಕ್ಷಕರ ಸಂಘ (ರಿ), ಬೆಂಗಳೂರು

KARNATAKA STATE FOREST GUARDS & WATCHERS ASSOCIATION (R), BENGALURU

ಪ್ರಧಾನ ಕಚೇರಿ, ಬೆಂಗಳೂರು

(ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅದಿನತ್ವ ಪಡೆದಿದೆ. ಅಖಿಲ ಭಾರತ ಮಹಾ ಸಂಘದಿಂದ ಪ್ರತಿನಿಧಿಸಲ್ಪಟ್ಟಿದೆ)

ಆತ್ಮೀಯರೇ,

“ಕಾಡು ನಾಡಿನ ಸಂಪತ್ತು ಹಸಿರು ದೇಶದ ಉಸಿರು” ಎಂಬ ಮಾತಿನಂತೆ ಕರ್ನಾಟಕದ ಹಸಿರು ಸಂಪತ್ತನ್ನು ಕಾಪಾಡಿ, ಬೆಳೆಸಿ, ಸಮೃದ್ದಿಯ ಹೊಣೆಹೊತ್ತು ನಿಂತಿರುವ ಅರಣ್ಯ ಇಲಾಖೆಯ ದಿಟ್ಟ ಯೋಧರ ಸಂರಕ್ಷಣೆ ಮತ್ತು ಬೇಡಿಕೆಗಳನ್ನು ಈಡೇರಿಸಲು ಪ್ರಸ್ತಾಪಿತ ವೇದಿಕೆ ಅರಣ್ಯ ಇಲಾಖೆಯ “FOREST PROTECTIVE FORCE” 1971ನೇ ಇಸ್ವಿಯಲ್ಲಿ ವೇದಿಕೆಯಾಗಿ ಹೊರಹೊಮ್ಮಿತು. ಈ ವೇದಿಕೆಯಲ್ಲಿ ಹಿರಿಯರ ಪ್ರಭಾವ ಮತ್ತು ಮುತ್ಸದ್ದೀತನ ಹೊರಹೊಮ್ಮಲು ಪ್ರಾರಂಬಿಸಿದಾಗ ಅರಣ್ಯ ಇಲಾಖೆಯ ಮುಂಚೂಣಿ ಸಿಬ್ಬಂದಿಗಳ ಬೇಡಿಕೆಗಳಿಗೆ ಸ್ಪಂದನೆದೊರೆಯದಿದ್ದಾಗ “ಕರ್ನಾಟಕ ರಾಜ್ಯ ಅರಣ್ಯ ರಕ್ಷಕರ ಮತ್ತು ವೀಕ್ಷಕರ ಸಂಘ(ರಿ) ಬೆಂಗಳೂರು” ಪದನಾಮದಲ್ಲಿ ರಾಜ್ಯದ “ಹಸಿರು ಯೋಧರ” ಯಶೋಗಾಥೆಯನ್ನು ಪ್ರಾರಂಬವಾಗಿಸಿ ಇಂದು 3994 ಅರಣ್ಯ ರಕ್ಷಕರ ಮತ್ತು ಸುಮಾರು 1500 ಅರಣ್ಯ ವೀಕ್ಷಕರ ಸದಸ್ಯರನ್ನು ಹೊಂದಿ ಬೃಹತ್ ಸಂಘವಾಗಿ ಹೊರಹೊಮ್ಮೀರುವುದು ಹೆಮ್ಮೇಯ ಸಂಗತಿ.

ಕರ್ನಾಟಕ ರಾಜ್ಯದ ಅರಣ್ಯ ಇಲಾಖೆಯಲ್ಲಿ ಮುಂಚೂಣಿ ಸಿಬ್ಬಂದಿಗಳಾದ ಅರಣ್ಯ ರಕ್ಷಕರ ಮತ್ತು ವೀಕ್ಷಕರಿಗೆ ಸಿಗಬೇಕಾದ ಪ್ರಾಥಮಿಕ ಸೇವಾ ಸವಲತ್ತುಗಳು, ಸರ್ಕಾರದ ಸೌಲಬ್ಯಗಳು, ಕಷ್ಟ ಪರಿಹಾರ ಭತ್ಯೆಗಳು, ಬಾಡಿಗೆರಹಿತ ಮನೆ, ವಾಹನ ಸೌಲಬ್ಯ, ಕರ್ತವ್ಯ ನಿರತರಾದಾಗ ಮರಣ ಹೊಂದಿದಾಗ ಇಡಿಗಂಟಿನ ಹಣ ನೀಡುವಂತೆ, ಆರೋಗ್ಯ ಬಾಗ್ಯಯೋಜನೆ ಸೌಲಬ್ಯವನ್ನು ಅರಣ್ಯ ಇಲಾಖೆಗೂ ವಿಸ್ತರಿಸುವುದು, ಸೇವಾನಿರತ ಸಿಬ್ಬಂದಿಗಳಿಗೆ ಮೀಸಲಾತಿ ಕಲ್ಪಿಸುವುದು. ಇನ್ನೂ ಹಲವಾರು ಬೆಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯ ಸಂಘವು ಮುನ್ನೆಡೆಯುತ್ತಿದೆ. ಸೌಲಬ್ಯಗಳನ್ನು ಇಲಾಖೆಯಿಂದ ಪ್ರಸ್ತಾವಣೆಗಳನ್ನು ಕಳುಹಿಸಿ, ರಾಜ್ಯ ಅರಣ್ಯ ರಕ್ಷಕ ಮತ್ತು ವೀಕ್ಷಕರಿಗೆ ಸೀಗಬೇಕಾದ ಸೌಲಬ್ಯಗಳನ್ನು ದೊರಕಿಸುವುದೇ ನಮ್ಮದ್ಯೇಯ..

Mr. VITTAL JONI
PRESIDENT

RANGE FOREST OFFICE DHARWAD, NEAR K.C PARK, DHARWAD

MOB: 9844585637


Mr. RAJU LIMBU CHAVAN
CHIEF SECRETARY

RANGE FOREST OFFICE SHIVAMOGGA, ALOKOL CROSS NEAR A.P.M.C SAGAR ROAD SHIVAMOGGA

MOB: 9980097180

ಕರ್ನಾಟಕ ರಾಜ್ಯ ಅರಣ್ಯ ರಕ್ಷಕರ ಮತ್ತು ವೀಕ್ಷಕರ ಸಂಘ, ಬೆಂಗಳೂರು
ವಿಳಾಸ : ಅರಣ್ಯ ಭವನ, ಮಲ್ಲೇಶ್ವರಂ, ಬೆಂಗಳೂರು.
ಉದ್ದೇಶಗಳು : ಸಂಘದ ಉದ್ದೇಶಗಳು ಈ ಕೆಳಕಂಡಂತ್ತಿರುತ್ತವೆ.

1. ಕರ್ನಾಟಕ ರಾಜ್ಯದಲ್ಲಿರುವ ಅರಣ್ಯ ರಕ್ಷಕರ ಹಾಗೂ ಅರಣ್ಯ ವೀಕ್ಷಕರ ಸಾಮಾಜಿಕ, ನಾಗರೀಕ, ಶೈಕ್ಷಣಿಕ ಮತ್ತು ಆರ್ಥಿಕ ಹಿತರಕ್ಷಣೆ ಮತ್ತು ಅವರ ಸರ್ವಾಂಗೀಣ ಪ್ರಗತಿಗೆ ಪ್ರಯತ್ನಿಸುವುದು.

2. ಸದಸ್ಯರ ಸೇವಾ ಅವಧಿಯಲ್ಲಿ ಕಾಲಾನುಸಾರ ಅವಶ್ಯವೆನಿಸಿದ ಸೇವಾ ಸಮಸ್ಯೆಗಳನ್ನು ಬಗೆಹರಿಸುವುದು ಮತ್ತು ಈ ಸಂಬಂಧವಾಗಿ ರಾಜ್ಯಾಂಗದತ್ತವಾಗಿ ದೊರೆಯಬಹುದಾದ ಹಕ್ಕು ಭಾದ್ಯತೆಗಳ ಸಂರಕ್ಷಣೆ ಮಾಡುವುದು. ನೌಕರರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಸಿಗುವಂತಹ ಸೌಲಭ್ಯಗಳನ್ನು ಸಂಘದ ಸದಸ್ಯರಿಗೆ ದೊರೆಯುವ ವ್ಯವಸ್ಥೆ ಮಾಡುವುದು.

3. ಸಂಘದ ಧ್ಯೇಯ ಧೋರಣೆಗೆ ಹೊಂದಿಕೊಳ್ಳಬಹುದಾದ ಯಾವುದೇ ಸಂಘ, ಒಕ್ಕೂಟಕ್ಕೆ ಸಹಕಾರ ನೀಡುವುದು ಇಲ್ಲವೆ ಸಂಲಗ್ನತೆ ಪಡೆಯುವುದು.

4. ಸದಸ್ಯರ ಸಾರ್ವಜನಿಕರ ಮಕ್ಕಳ ಶಿಕ್ಷಣಕ್ಕಾಗಿ ವಿಹಾರ, ಅಂಗನವಾಡಿ, ಬಾಲವಾಡಿ, ಪ್ರಾಥಮಿಕ ಮತ್ತು ಮಾಧ್ಯಮಿಕ ಪಾಠಶಾಲೆಗಳು, ಮಹಾ ವಿದ್ಯಾಲಯಗಳು, ತಾಂತ್ರಿಕ ಶಿಕ್ಷಣ ಸಂಸ್ಥೆಗಳು, ತರಬೇತಿ ಕೇಂದ್ರಗಳನ್ನು ಸ್ಥಾಪಿಸುವುದು ಮತ್ತು ನಡೆಸುವುದು.

5. ನೌಕರರಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಬಂದಾಗ ಅವುಗಳನ್ನು ಸಂಧಾನಗಳ ಮೂಲಕ ಪರಿಹರಿಸಿಕೊಳ್ಳುವುದು.

6. ಸದಸ್ಯರ ಹಾಗೂ ಸಾರ್ವಜನಿಕರ ಅನುಕೂಲತೆಗಾಗಿ ವಾಚನಾಲಯ ಹಾಗೂ ಗ್ರಂಥ ಭಂಡಾರಗಳನ್ನು ಸ್ಥಾಪಿಸುವುದು.

7. ಕಾಲ ಕಾಲಕ್ಕೆ ನಡೆಯುವ ನೇಮಕಾತಿಗಳಲ್ಲಿ ಮೀಸಲಾತಿ ಪದ್ಧತಿಯನ್ನು ಅನುಸರಿಸುವಂತೆ ನೋಡಿಕೊಳ್ಳುವುದು.

8. ರಾಷ್ಟ್ರೀಯ ಹಬ್ಬದ ದಿನಾಚರಣೆಯನ್ನು ಆಚರಿಸುವುದು ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಮತ್ತು ಮನೋರಂಜನೆಗಾಗಿ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸುವುದು.

9. ಇಲಾಖೆಯಲ್ಲಿ ವಿಶಿಷ್ಠ ಸೇವೆ ಸಲ್ಲಿಸಿದವರನ್ನು ಗುರುತಿಸಿ ಸನ್ಮಾನಿಸುವುದು ಮತ್ತು ಇಲಾಖೆಯ ನೌಕರರ ಮಕ್ಕಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡುವುದು.

ಮೇಲ್ಕಂಡ ಉದ್ದೇಶಗಳ ಸಾಧನೆಗಾಗಿ ಈ ಕೆಳಕಂಡ ಕಾರ್ಯಗಳನ್ನು ಮಾಡುದು

  1. ಸದಸ್ಯರು, ಸಾರ್ವಜನಿಕರು, ಸರ್ಕಾರ, ಬ್ಯಾಂಕ್ ಹಾಗೂ ಇತರೆ ಸಂಘ ಸಂಸ್ಥೆಗಳಿಂದ ಚಂದಾ, ದೇಣಿಗೆ ಶುಲ್ಕ, ಸಹಾಯ ಧನ, ಸಾಲ, ಠೇವಣಿ, ಮುಂಗಡ ಹಣ ಮೊದಲಾದ ರೀತಿಗಳಿಂದ ಹಣ ಶೇಖರಿಸುವುದು.

  2. ನಿವೇಶನ ಕಟ್ಟಡ, ಪೀಠೋಪಕರಣಗಳು, ಇತರೆ ಉಪಕರಣಗಳು ಮೊದಲಾದ ಆಸ್ತಿಗಳನ್ನು ಕ್ರಯ, ಬಾಡಿಗೆ ಬೋಗ್ಯ ಅಥವಾ ಬೇರಾವುದೇ ರೀತಿಯಿಂದ ಪಡೆಯುವುದು, ಉಪಯೋಗಿಸುವುದು ಮತ್ತು ವಿಲೇವಾರಿ ಮಾಡುವುದು, ಸಮುದಾಯ ಭವನ, ರಂಗಮಂದಿರ, ಪಾಠಶಾಲೆಗಳು, ಮೊದಲಾದ ಕಟ್ಟಡಗಳನ್ನು ಕಟ್ಟಿಸುವುದು.

  3. ಸಭೆ, ಸಮ್ಮೇಳನಗಳನ್ನು ವಿಚಾರ ಸಂಕಿರಣಗಳನ್ನು ಮತ್ತು ಪ್ರದರ್ಶನಗಳನ್ನು ಏರ್ಪಡಿಸುವುದು.

  4. ಸಂಘದ ಆದಾಯವನ್ನು (ಅದು ಯಾವುದೇ ರೀತಿಯಿಂದ ಬಂದಿರಲಿ) ಸದಸ್ಯರಲ್ಲಾಗಲೀ ಅಥವಾ ಬೇರೆಯವರಲ್ಲಾಗಲೀ, ಯಾವುದೇ ತರಹದಿಂದ ವಿತರಣೆ ಮಾಡಕೂಡದು ಮತ್ತು ಅದನ್ನು ಸಂಘದ ಉದ್ದೇಶಗಳನ್ನು ಅನುಷ್ಠಾನಕ್ಕೆ ತರಲು ಮಾತ್ರ ಉಪಯೋಗಿಸುವುದು.

  5. ನಿವೇದನ ಪತ್ರಿಕೆ ಮತ್ತು ನಿಬಂಧನೆಗಳನ್ನು ರಿಜಿಸ್ಟ್ರಾರ್‍ರವರಿಗೆ ಸಲ್ಲಿಸಲು ಮತ್ತು ಅವರೊಡನೆ ವ್ಯವಹರಿಸಲು ಸಂಘದ ಕಾರ್ಯದರ್ಶಿಯವರಿಗೆ ಅಧಿಕಾರ ಕೊಟ್ಟಿರುತ್ತದೆ.


News and Notifications

   ದಿನಾಂಕ 24/8/18
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ (ರಿ) ಬೆಂಗಳೂರು ಆಶ್ರಯದಲ್ಲಿ ಇವತ್ತು ರಾಜ್ಯ ಮಟ್ಟದ ಏನ್ . ಪಿ. ಎಸ್ ನೌಕರರ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು . ಸದರಿ ಕಾರ್ಯಾಗಾರದಲ್ಲಿ ಏನ್ . ಪಿ. ಎಸ್ ಸಾಧಕ ಬುಧಕಗಳ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು. ಸರ್ಕಾರದ ಪರವಾಗಿ ಸಚಿವ ಜೆ . ಟಿ ದೇವೇಗೌಡರು ಕಾರ್ಯಕ್ರಮದಲ್ಲಿ ಭಾಗವಹಿಸಿ ಏನ್ . ಪಿ. ಎಸ್ ರದ್ದುಗೊಳಿಸುವ ನಿಟ್ಟಿನಲ್ಲಿ ಸರ್ಕಾರವು ಪ್ರಯತ್ನ ಮಾಡಿತ್ತದೆ ಎಂದು ಹೇಳಿದರು.


   ದಿನಾಂಕ 20/8/2018 ರಂದು ಮಾನ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಮುಖ್ಯಸ್ಥರು ಅರಣ್ಯ ಪಡೆ, ಶ್ರೀ ಪುನಾಟಿ ಶ್ರೀಧರ್ ಅವರು, ವೆಬ್ಸೈಟ್ ಉದ್ಘಾಟಿಸಿದರು.


   ಹಸಿರು ಕರ್ನಾಟಕ ಆಂದೋಲನ ಕಾರ್ಯಕ್ರಮಕ್ಕೆ ಸಂಘದಿಂದ ಬಿಡುಗಡೆ ಗೊಳಿಸಿದ ಆಡಿಯೋ ಕ್ಲಿಪ್


  • ಶ್ರೀ ದೇವ್ರಾಜ್ ಪಾನೇ ಮಂಗಳೂರು ವೃತ್ತಮೊ:9448479155
  • ಶ್ರೀ ಎಂ.ಮಂಜುನಾಥ್ ಶಿವಮೊಗ್ಗ ವೃತ್ತ ಮೊ:9449826717
  • ಶ್ರೀ ಗಿರಿಧರ ಅಗರವಾಲೆ ಧಾರವಾಡ ವೃತ್ತ ಮೊ:7760222285
  • ಶ್ರೀ ಹೆಚ್.ಬಿ.ಬಿರಾದಾರ ಕಲಬುರಗಿ ವೃತ್ತಮೋ: 95914354145
  • ಶ್ರೀ ನಾಗರಾಜಎಂಟೆತ್ತಿನವರ ಕೆನರಾ ವೃತ್ತ ಮೋ:9483842798 5
  • ಶ್ರೀ ಹನುಮoತರಾಯಪ್ಪ ಬಿ.ಎನ್ ಬೆಂಗಳೂರು ವೃತ್ತ ಮೊ:9880176182
  • ಶ್ರೀ ರಾಘವೇಂದ್ರ ಬೆಂಗಳೂರು ವೃತ್ತ:9880254931
  • ಶ್ರೀ ನಾರಾಯಣ್ ಆರ. ಮೈಸೂರ್ ವೃತ್ತ ಮೊ:9483151825
  • ಶ್ರೀ ಕೇಶವ್ ಪೂಜಾರಿ ಮಂಗಳೂರು ವೃತ್ತ ಮೊ:9731851993
  • ಶ್ರೀ ದೀಲಿಪ್ ಕುಮಾರ್ ಚಾಮರಾಜ್ ನಗರ್ ವೃತಃ 9739620064
  • ಶ್ರೀ ಗಿರೀಶ್ ಹಾಸನ್ ವೃತ್ತ ಮೊ:9663985172
  • ಶ್ರೀ ಕಾರ್ತಿಕ ಕೊಡಗು ವೃತ್ತ ್ತ ಮೋ: 9481979414
  • ಶ್ರೀ ಶ್ರೀನಿವಾಸ್ ವಿ. ಬೆಂಗಳೂರು ವೃತ್ತ ಮೊ:8310463796
  • ಶ್ರೀ ಪಿ.ಬಿ.ತಂಗಡಿ ಬೆಳಗಾವಿ ವೃತ್ತ ಮೋ:9986711347053
  • ಶ್ರೀ ಪ್ರದೀಪಯು.ಕೆ ಚಿಕ್ಕಮಂಗಳೂರು ವೃತ್ತ ಮೋ:9480477442
  • ಶ್ರೀ ಜಬೀವುಲ್ಲಾ ಅ.ವೀ ಬೆಂಗಳೂರು ವೃತ್ತ ಮೋ:889236823232
  • ಶ್ರೀ ವಿನಾಯಕ ಕೋಡಾರಕರ್ ಕೆನರಾ ವೃತ್ತ ಮೊ:9590060917
  • ಶ್ರೀಮತಿ ಅನ್ನಪೂರ್ಣ ಸಂಗೋಲಿ ಕಲಬುರಗಿ ವೃತ್ತ ಮೋ:9611456114
Gallery